ನೀತಿಸಂಹಿತೆ

This page is a translated version of the page Code of Conduct and the translation is 90% complete.

ಇದು ವಿಕಿಮೀಡಿಯಾದ ತಾಂತ್ರಿಕ ಸ್ಥಳದಲ್ಲಿ ಪಾಲಿಸಬೇಕಾದ ನೀತಿಸಂಹಿತೆ. ಇದು ಭೌತಿಕವಾದ ವಿಕಿಮೀಡಿಯಾದ ತಾಂತ್ರಿಕ ಇವೆಂಟುಗಳು ಮತ್ತು ಇತರ ಇವೆಂಟುಗಳಲ್ಲಿ ನಡೆಯುವ ವಿಕಿಮೀಡಿಯಾ ತಾಂತ್ರಿಕ ಪ್ರಾತ್ಯಕ್ಷಿಕೆಗಳೆರಡಕ್ಕೂ ಅನ್ವಯವಾಗುತ್ತದೆ. ಜೊತೆಗೆ ವಿಕಿಮೀಡಿಯಾದ ಆನ್ಲೈನ್ (virtual) ಜಾಗಗಳಿಗೂ (MediaWiki.org, wikitech.wikimedia.org, Phabricator, Gerrit, technical mailing lists, technical IRC channels, Etherpad, ಹಾಗೂ ವಿಕಿಮೀಡಿಯಾ ಫೌಂಡೇಶನ್ ಇಂದ ನಡೆಸಲ್ಪಡುವ ಇತರ ಅಭಿವೃದ್ಧಿ ಸಂಬಂಧಿತ ಜಾಗಗಳು) ಅನ್ವಯವಾಗುತ್ತದೆ

ನೀತಿಗಳು

ಯಾವುದೇ ಲಿಂಗ, ಲಿಂಗ ಗುರುತು ಹಾಗೂ ಅಭಿವ್ಯಕ್ತಿ, ಲೈಂಗಿಕತೆ, ಲೈಂಗಿಕ ಮನೋಭಾವ, ಅಸಮರ್ಥತೆ, neuroatypicality, ಭೌತಿಕ ರೂಪ, ದೇಹಗಾತ್ರ, ಜಾತಿ, ಜನಾಂಗ, ರಾಷ್ಟ್ರೀಯತೆ, ವಯಸ್ಸು, ರಾಜಕೀಯ ಒಲವು ಹಾಗೂ ಧರ್ಮ ಮುಂತಾದ ಯಾವುದೇ ತಾರತಮ್ಯವಿಲ್ಲದಂತೆ ಒಂದು ಮುಕ್ತ ಮತ್ತು ಸ್ವಾಗತಾರ್ಹ ಸಮುದಾಯವನ್ನು ಪ್ರೋತ್ಸಾಹಿಸುವ ಉದ್ದೇಶಕ್ಕಾಗಿ, ಎಲ್ಲರಿಗೂ ನಾವು ವಿಕಿಮೀಡಿಯಾದ ತಾಂತ್ರಿಕ ಯೋಜನೆಗಳಲ್ಲಿ ಭಾಗವಹಿಸುವಿಕೆಯನ್ನು ಒಂದು ಗೌರವಯುತ, ತೊಂದರೆರಹಿತ ಅನುಭವವನ್ನಾಗಿ ಮಾಡಲು ಬದ್ಧರಾಗಿದ್ದೇವೆ.

ಗೌರವವನ್ನು ಪಡೆಯುವ ಹಕ್ಕಿಗೆ ಮತ್ತು ಇತರರನ್ನು ಗೌರವಿಸಬೇಕಾದ ಹೊಣೆಗೆ ತಾಂತ್ರಿಕ ಕೌಶಲ್ಯ ಮತ್ತು ಸಾಮುದಾಯಿಕ ಸ್ಥಾನಮಾನವು ಯಾವುದೇ ವ್ಯತ್ಯಾಸ ಬೀರುವುದಿಲ್ಲ. ಹೊಸಬರು ಮತ್ತು ಸೀಮಿತ ಅನುಭವವಿರುವ ಇತರ ಕೊಡುಗೆದಾರರೂ ಸಹ ಒಂದು ಸ್ವಾಗತಾರ್ಹ ವಾತಾವರಣ ಹಾಗೂ ರಚನಾತ್ಮಕ ಹಿನ್ನುಣಿಕೆಗೆ ಅರ್ಹರಾಗಿರುತ್ತಾರೆ. ಹಾಗೆಂದು ಅನುಭವಿ ಕೊಡುಗೆದಾರರು ಮತ್ತು ತಾಂತ್ರಿಕ ಪರಿಣಿತರೊಡನೆ ಅನುಚಿತ ವರ್ತನೆಗಳು ಸಮರ್ಥನೀಯವಲ್ಲ.

ಒಪ್ಪಿತವಲ್ಲದ ನಡವಳಿಕೆ

ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಿಕಿಮೀಡಿಯ ತಾಂತ್ರಿಕ ಜಾಗಗಳಲ್ಲಿ ಕಿರುಕುಳ ಹಾಗೂ ಇತರ ಬಗೆಯ ಅನುಚಿತ ವರ್ತನೆಗಳು ಒಪ್ಪಿತವಲ್ಲ. ಕೆಲವು ಉದಾಹರಣೆಗಳು ಹೀಗಿವೆ, ಆದರೆ ಅದು ಇಷ್ಟಕ್ಕೇ ಸೀಮಿತವಲ್ಲ:

 • ವೈಯಕ್ತಿಕ ದಾಳಿಗಳು, ಹಿಂಸೆ, ಹಿಂಸೆ ಬೆದರಿಕೆ, ಅಥವಾ ಉದ್ದೇಶಪೂರ್ವಕ ಬೆದರಿಕೆ.
 • ಆಕ್ರಮಣಕಾರಿ, ಅವಹೇಳನದ ಅಥವಾ ತಾರತಮ್ಯದ ಟೀಕೆಗಳು.
 • ಅನಪೇಕ್ಷಿತ, ಅಥವಾ ಸಂಬಂಧವಿಲ್ಲದ ಲೈಂಗಿಕ ಭಾಷೆ ಅಥವಾ ಚಿತ್ರಗಳ ಬಳಕೆ.
 • ಅನುಚಿತ ಅಥವಾ ಅನಪೇಕ್ಷಿತ ಗಮನ ಸೆಳೆಯುವಿಕೆ, ಸ್ಪರ್ಶ, ಅಥವಾ ದೈಹಿಕ ಸಂಪರ್ಕ (ಲೈಂಗಿಕ ಅಥವಾ ಇತರಬಗೆ)
 • ಅನುಚಿತ ಅಥವಾ ಅನಪೇಕ್ಷಿತ ಸಾರ್ವಜನಿಕ ಅಥವಾ ಖಾಸಗಿ ಸಂವಹನ, ಹಿಂಬಾಲಿಸುವಿಕೆ ಅಥವಾ ಬೇರೆ ಯಾವುದೇ ರೀತಿಯ ಬೆನ್ನಟ್ಟುವಿಕೆ.
 • ಅನಪೇಕ್ಷಿತ ಫೋಟೋಗ್ರಫಿ ಅಥವಾ ರೆಕಾರ್ಡಿಂಗ್
 • ಒಬ್ಬ ವ್ಯಕ್ತಿಯ ಒಪ್ಪಿಗೆ ಇಲ್ಲದೇ ಅವರ ಗುರುತು ಅಥವಾ ಇತರ ಖಾಸಗಿ ಮಾಹಿತಿಗಳನ್ನು ಬಹಿರಂಗಗೊಳಿಸುವುದು. ಕೆಲ ಗುರುತು ಮಾಹಿತಿಗಳನ್ನು ತಿಳಿಯಪಡಿಸುವುದು ಇತರ ಗುರುತುಮಾಹಿತಿಗಳನ್ನು ಬಹಿರಂಗಗೊಳಿಸಲು ಒಪ್ಪಿಗೆಯನ್ನು ಸೂಚಿಸುವುದಿಲ್ಲ.
 • ಖಾಸಗಿ ಸಂವಹನಗಳ ಅನುಚಿತ ಅಥವಾ ಅನಪೇಕ್ಶಷಿತ ಪ್ರಕಟಣೆ. ಖಾಸಗಿ ಸಂವಹನಗಳನ್ನು ಅಥವಾ ಖಾಸಗಿ ಗುರುತು ಮಾಹಿತಿಗಳನ್ನು ಕಿರುಕುಳ ವರದಿಯ (ಇಲ್ಲಿ ವಿವರಿಸಿದಂತೆ) ಕಾರಣಕ್ಕಾಗಿ ಅಥವಾ whistleblowing ಉದ್ದೇಶಗಳಿಗಾಗಿ ಪ್ರಕಟಪಡಿಸುವುದು ಅಥವಾ ವರದಿಮಾಡುವುದು ಒಪ್ಪಿತವಾಗಿರುತ್ತದೆ.
 • ಸತತವಾಗಿ ಅಡ್ಡಿಮಾಡುವ ಅಥವಾ ಸಮುದಾಯದ ಸಹಯೋಗವನ್ನು ನಿರ್ಬಂಧಿಸುವಂತಹ ಕ್ರಮಗಳ ಮೂಲಕ ಚರ್ಚೆಗಳಿಗೆ ಅಥವಾ ಸಮುದಾಯಕ್ಕೆ ಹಾನಿಯುಂಟುಮಾಡುವುದು.
 • ಮಹತ್ವವಿಲ್ಲದ್ದಾಗಿ ಮತ್ತು ಆಮೂಲಕ underrepresented ಗುಂಪುಗಳ ವಿರುದ್ಧ ನಿರ್ದಿಷ್ಟವಾಗಿ ತಾರತಮ್ಯ ಧೋರಣೆ. ಅಂತಹ ಗುಂಪುಗಳನ್ನು ಗುರಿಯಾಗಿಸಿಕೊಂಡ outreachಗಳಿಗೆ ಅವಕಾಶ ಮತ್ತು ಪ್ರೋತ್ಸಾಹ ಇದೆ.
 • ನೀತಿಸಂಹಿತೆಯ ನಿಜವಾದ ಉಲ್ಲಂಘನೆಗಳನ್ನು ವರದಿಮಾಡುವುದರ ಹೊರತು ಬೇರೆ ಉದ್ದೇಶಗಳಿಗೆ ನೀತಿಸಂಹಿತೆ ವ್ಯವಸ್ಥೆಯನ್ನು ಬಳಸಿಕೊಳ್ಳುವುದು. (ಉದಾ: ವರದಿಮಾಡಿದವರ ಅಥವಾ ತೊಂದರೆಗೊಳಗಾದವರ ಮೇಲೆ ಸೇಡಿಗಾಗಿ ಅವರ ವಿರುದ್ದ ಕಿರುಕುಳದ ವರದಿ ಮಾಡುವುದು)
 • Committeeಯ ತೀರ್ಮಾನವು ಯಶಸ್ವಿಯಾಗದಂತೆ ಮಾಡುವ ಪ್ರಯತ್ನಗಳು, ಉದಾ: ಯಾರೊ ಒಬ್ಬರನ್ನು ಸಮಿತಿಯು ನಿರ್ಬಂಧಿಸಿದ ಸಮಯದಲ್ಲಿ ಅವರ ನಿರ್ಬಂಧವನ್ನು ತೆಗೆದುಹಾಕುವುದು.

ಸಮಸ್ಯೆಯನ್ನು ವರದಿಮಾಡುವುದು

ಹಾನಿಯುಂಟು ಮಾಡುವಂತಹ ಬೆದರಿಕೆ ಅಥವಾ ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಮೊದಲು ಮಾಹಿತಿಕೊಡಬೇಕು (ಸಾಧ್ಯವಾದಲ್ಲಿ) ಮತ್ತು ವಿಕಿಮೀಡಿಯ ಫೌಂಡೇಶನ್'ಗೆ ಇಮೇಲ್ ಮಾಡಿ via emergency wikimedia.org (ಹೆಚ್ಚಿನ ಮಾಹಿತಿ).

ಒಪ್ಪಿತವಲ್ಲದ ನಡವಳಿಕೆಯನ್ನು ಗಮನಿಸಿದ ಅತಥವಾ ಅನುಭವಿಸಿದ ಜನರು ಈ ಕೆಳಗಿನ ಕ್ರಮವನ್ನು ಪಾಲಿಸುವಂತೆ ಪ್ರೋತ್ಸಾಹಿಸಲಾಗುತ್ತದೆ:

 1. ಅನುಚಿತವಾಗಿ ವರ್ತಿಸುತ್ತಿರುವ ವ್ಯಕ್ತಿಗೆ ಆ ರೀತಿ ನಡೆದುಕೊಳ್ಳದಂತೆ ಹೇಳುವುದು. ನೀತಿಸಂಹಿತೆಯ ಬಗ್ಗೆ ಮಾಹಿತಿ ನೀಡುವುದು.
 2. ನೀವು ಯಾವುದಾದರೂ ಕಾರ್ಯಕ್ರಮಗಳಲ್ಲಿ ಇದ್ದಲ್ಲಿ, ಆ ಕಾರ್ಯಕ್ರಮದ ಆಯೋಜಕರಿಗೆ ಅಥವಾ ಸಂಬಂಧಿತ ವ್ಯವಸ್ಥಾಪಕ ವ್ಯಕ್ತಿಗಳಿಗೆ ವರದಿಮಾಡುವುದು.
 3. ನೀವು ಸಮಸ್ಯೆಯನ್ನು ಒಂದೆಡೆ ವರದಿಮಾಡಿದ್ದು ಅದಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ನಿಮಗೆ ತೃಪ್ತಿಯಾಗದಿದ್ದಲ್ಲಿ techconduct wikimedia.org ಮೂಲಕ ನೀತಿಸಂಹಿತೆ ಸಮಿತಿಗೆ ನೇರವಾಗಿ ಸಮಸ್ಯೆಯನ್ನು ವರದಿಮಾಡುವುದು.

ವರದಿಮಾಡುವುದು ಕೇವಲ ಒಂದು ಕೊಂಡಿಯ ಜೊತೆಗೆ ಕೊಡುವ ಸೂಚನೆಯೂ ಆಗಬಹುದು. ಆದರೆ ಹೆಚ್ಚು ಮಾಹಿತಿಯನ್ನು ಒದಗಿಸುವುದು ಪರಿಸ್ತಥಿತಿಯನ್ನು ಸರಿಯಾಗಿ ಅರ್ತಥಮಾಡಿಕೊಳ್ಳಲು ನಮಗೆ ಸಹಾಯವಾಗುತ್ತದೆ. ಈ ಕೆಳಗಿನ ಮಾಹಿತಿಗಳನ್ನು ಒದಗಿಸಬಹುದು.

 • ನಿಮ್ಮ ಗುರುತುಹೇಳಿಕೊಳ್ಳುವ ಇಚ್ಚೆಯಿದ್ದಲ್ಲಿ, ನಿಮ್ಮ ಸಂಪರ್ಕಮಾಹಿತಿ(ಉದಾ: ವಿಕಿಮೀಡಿಯಾ ಮತ್ತು ಫ್ಯಾಬ್ರಿಕೇಟರ್ ಬಳಕೆದಾರಹೆಸರುಗಳು (ಯೂಸರ್ ನೇಮ್)).
 • ಘಟನೆಯ ಬಗ್ಗೆ ನಿಮ್ಮ ದಾಖಲೆಗಳು
  • ಎಲ್ಲಿ ಮತ್ತು ಯಾವಾಗ ನಡೆದಿದ್ದು
  • ಅನುಚಿತ ವರ್ತನೆ ಬಗ್ಗೆ ವಿವರಗಳು
  • ಇದು ಯಾರು ಮಾಡಿದ್ದು ಮತ್ತು ಯಾರು ಅದನ್ನು ನೋಡಿದ್ದು
  • ಆ ಘಟನೆ ಈಗಲೂ ನಡೆಯುತ್ತಿದೆಯೆ.
 • ಆ ಸಮಸ್ಯೆಯನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ನೆರವಾಗುವಂತಹ ಹೆಚ್ಚಿನ ಮಾಹಿತಿಗಳು, ಅಂದರೆ ಹಿಂದೆ ನಡೆದ ಘಟನೆಗಳು ಅಥವಾ ಮತ್ತೇನಾದರೂ ವಿಶೇಷ ಸನ್ನಿವೇಶಗಳು.
 • ಘಟನೆಗೆ ಸಂಬಂಧಿಸಿದಂತೆ ಯಾವುದಾದರೂ ಸಾರ್ವಜನಿಕ ದಾಖಲೆಗಳಿಗೆ ಇದ್ದಲ್ಲಿ ಅದಕ್ಕೆ ಸಂಪರ್ಕಕೊಂಡಿಗಳು
 • ಏನಾಗಿದೆ ಎಂದು ತೋರಿಸುವ Screenshots

ವರದಿಗಳನ್ನು ಗೌಪ್ಯವಾಗಿಡಲಾಗುವುದು. ಹೆಚ್ಚಿನ ಮಾಹಿತಿಗಾಗಿ, ಇದನ್ನು ನೋಡಿ:Confidentiality

ಸಮಿತಿಗೆ ವರದಿಮಾಡಲ್ಪಟ್ಟ ಸಮಸ್ಯೆಗಳನ್ನು ಹೇಗೆ ಪರಿಶೀಲಿಸಲಾಗುತ್ತದೆ ಎಂದು ತಿಳಿದುಕೊಳ್ಳಲು ಇದನ್ನು ನೋಡಿ Code of Conduct/Cases

ಆರೋಪಣೆ(Attribution) ಮತ್ತು ಮರು-ಬಳಕೆ

ಈ ನೀತಿಸಂಹಿತೆಯನ್ನು Contributor Covenant (revision 49054013), the jQuery Code of Conduct (revision 91777886), the Open Code of Conduct (v1.0)- ಇವುಗಳಿಂದ ಮತ್ತು Citizen Code of Conduct - ಇದರಿಂದ ಹಾಗೂ ಜೊತೆಗೆ ವಿಕಿಮೀಡಿಯಾ ಫೌಂಡೇಶನ್ನಿನ Friendly space policyಯಿಂದ ಅಳವಡಿಸಿಕೊಳ್ಳಲಾಗಿದೆ.

Contributor Covenant ಮತ್ತು the jQuery ನೀತಿಸಂಹಿತೆ ಪಠ್ಯವು MIT License ಅಡಿಯಲ್ಲಿ ಬಳಸಲ್ಪಡುತ್ತದೆ. (Contributor Covenant ಪರವಾನಗಿಯನ್ನು ಈಗ CC BY 4.0 ಗೆ ಬದಲಾಯಿಸಿಕೊಂಡಿದೆ.). ಮುಕ್ತ ನೀತಿಸಂಹಿತೆಯ ಪಠ್ಯವನ್ನು Creative Commons Attribution license ಅಡಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ನಾಗರೀಕ ನೀತಿಸಂಹಿತೆಯ ಪಠ್ಯವನ್ನು Creative Commons Share-alike Attribution ಪರವಾನಗಿ ಅಡಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಎಲ್ಲಾ ಪಠ್ಯವು MediaWiki.org'ನ ಸ್ಟ್ಯಾಂಡರ್ಡ್ ಪರವಾನಗಿಯ (CC BY-SA 3.0) ಅಡಿಯಲ್ಲಿದೆ.

ನಮ್ಮ ತಾಂತ್ರಿಕ ಜಾಗಗಳನ್ನು ಪ್ರತಿಯೊಬ್ಬರಿಗೂ ಸ್ನೇಹಮಯವಾತಾವರಣವನ್ನಾಗಿ ಮಾಡುವುದಕ್ಕೋಸ್ಕರ ಪರಸ್ಪರ ಎಲ್ಲರ ಕೊಡುಗಗೆಗಳನ್ನು ಹಾಗೂ ಪ್ರತಿಯೊಬ್ಬ ಕೊಡುಗೆದಾರನ ಬದ್ಧತೆಯನ್ನು ನಾವು ಗೌರವಿಸುತ್ತೇವೆ. ವಿಕಿಮೀಡಿಯಾದ ತಾಂತ್ರಿಕ ಬಂಡವಾಳವನ್ನು ಬಳಸಿಕೊಳ್ಳುವ ಅಥವಾ ಬಳಸಿಕೊಳ್ಳದ ಇತರ ಯೋಜನೆಗಳು ಈ ನೀತಿಸಂಹಿತೆಯನ್ನು ಅಳವಡಿಸಿಕೊಳ್ಳಲು ಮತ್ತು ಹೊಂದಿಸಿಕೊಳ್ಳಲು ನಾವು ಉತ್ತೇಜನ ಕೊಡುತ್ತೇವೆ.

ಇವನ್ನೂ ನೋಡಿ